ವಾಲ್ಮೀಕಿಮುನಿಗಳ ಅಲಂಕಾರಸೌಭಾಗ್ಯ
ವಿವಿಧಘನಾಲಂಕಾರಂ ವಿಚಿತ್ರವರ್ಣಾವಲೀಮಯಸ್ಫುರಣಮ್ | ಶಕ್ರಾಯುಧಮಿವ ವಕ್ರಂ ವಲ್ಮೀಕಭುವಂ ಕವಿಂ ನೌಮಿ || (ಆರ್ಯಾಸಪ್ತಶತೀ, ೧.೩೦) ೧ ಭಗವಾನ್ ವಾಲ್ಮೀಕಿಮಹರ್ಷಿಗಳ ಆದಿಕಾವ್ಯ ರಾಮಾಯಣವು ಕಾಳಿದಾ...
ವಿವಿಧಘನಾಲಂಕಾರಂ ವಿಚಿತ್ರವರ್ಣಾವಲೀಮಯಸ್ಫುರಣಮ್ | ಶಕ್ರಾಯುಧಮಿವ ವಕ್ರಂ ವಲ್ಮೀಕಭುವಂ ಕವಿಂ ನೌಮಿ || (ಆರ್ಯಾಸಪ್ತಶತೀ, ೧.೩೦) ೧ ಭಗವಾನ್ ವಾಲ್ಮೀಕಿಮಹರ್ಷಿಗಳ ಆದಿಕಾವ್ಯ ರಾಮಾಯಣವು ಕಾಳಿದಾ...
ಈಗ ಕಾಂಡಾನುಸಾರವಾಗಿ ಪರಿಶೀಲಿಸೋಣ: ಬಾಲಕಾಂಡದಲ್ಲಿ ಮನಮುಟ್ಟುವ ಉಪಮೆಗಳೇ ವಿರಳ. ಅಷ್ಟೇಕೆ, ಉಳಿದ ಅಲಂಕಾರಗಳೂ ಕಡಮೆ. ಆದರೂ ಪ್ರಾತಿನಿಧಿಕವಾಗಿ ಅತ್ಯುತ್ತಮವೆನ್ನಬಹುದಾದ ಒಂದು ಉದಾಹರಣೆಯನ್ನು ಕಾ...
ಅರಣ್ಯಕಾಂಡದ ಉಪಮಾಪ್ರಪಂಚ ಸಾಕಷ್ಟು ವಿಸ್ತಾರವಾದುದು. ವಿಶೇಷತಃ ಅಲ್ಲಿಯ ಹೇಮಂತವರ್ಣನೆಯಲ್ಲಿ ಉಪಮೆಯ ವಿಶ್ವರೂಪವನ್ನು ಕಾಣಬಹುದು. ಸೂರ್ಯನು ದಕ್ಷಿಣದಿಕ್ಕಿಗೆ ತಿರುಗಿದ ಕಾರಣ ಉತ್ತರದಿಕ್ಕಿನಲ್ಲಿ...
ಮರಣಾಸನ್ನನಾದ ವಾಲಿಯ ಪರಿಸ್ಥಿತಿಯನ್ನು ಮಹರ್ಷಿಗಳು ಮನಮುಟ್ಟುವಂತೆ ವರ್ಣಿಸುತ್ತ ಆತನು ಹೊಗರನ್ನು ಕಳೆದುಕೊಂಡ ಕಮಲಬಾಂಧವನಂತೆ, ನೀರೆಲ್ಲ ಸೋರಿಹೋದ ಬೆಳ್ಮೋಡದಂತೆ, ಆರಿಹೋಗುತ್ತಿರುವ ಅಗ್ನಿಯಂತೆ ತ...
ಸುಂದರಕಾಂಡದ ಸಾರವತ್ತಾದ ಭಾಗಗಳಲ್ಲೊಂದು ಸೀತೆಯನ್ನು ಹನೂಮಂತನು ಕಂಡದ್ದು. ವಿಶೇಷತಃ ಆಕೆಯನ್ನು ಹತ್ತಾರು ಹೋಲಿಕೆಗಳ ಮೂಲಕ ಆದಿಕವಿಗಳು ವರ್ಣಿಸುವಲ್ಲಿ ಹೆಚ್ಚು-ಕಡಮೆ ಒಂದು ಸರ್ಗವನ್ನೇ ಮೀಸಲಿಟ್ಟಿ...
೩ ಉತ್ಪ್ರೇಕ್ಷೆಯು ಪ್ರಾಥಮಿಕಾಲಂಕಾರಗಳ ಪೈಕಿ ತುಂಬ ಪರಿಣಾಮಕಾರಿ. ಇದು ಉಪಮೆಯಷ್ಟು ಸರಳವೂ ಅಲ್ಲ, ಅತಿಶಯೋಕ್ತಿಯಷ್ಟು ಅಬ್ಬರದ್ದೂ ಅಲ್ಲ. ಸಂಭವನೀಯತೆಯೇ ಈ ಅಲಂಕಾರದ ಜೀವಾಳ. ಅತಿಶಯೋಕ್ತಿಯಾದರೋ ಅ...
ವಾಲ್ಮೀಕಿಮುನಿಗಳು ಉತ್ಪ್ರೇಕ್ಷೆಯನ್ನು ಕಥಾನಿರೂಪಣೆಯ ಕಾಲದಲ್ಲಿಯೂ ಬಳಸಿಕೊಳ್ಳುತ್ತಾರೆ. ಅಷ್ಟೇಕೆ, ಸಾಮಾನ್ಯವಾದ ಸಂವಾದಗಳಲ್ಲಿಯೂ ಇದು ತಲೆದೋರುತ್ತದೆ. ತನ್ನ ಭುವನಕೋಶಪ್ರಜ್ಞೆಗೆ ಬೆರಗಾದ ರಾಮನನ...
ಅತಿಶಯೋಕ್ತಿಯನ್ನು ಕಾವ್ಯಲೋಕದ ಜೀವಾಳವೆಂದೇ ಆನಂದವರ್ಧನನು ಆದರಿಸಿದ್ದಾನೆ. ಅಧ್ಯವಸಾಯ ಅಥವಾ ಮಿಗಿಲಾದ ಕಲ್ಪನೆಯೇ ಇದರ ಹೃದಯ. ಕವಿಪ್ರತಿಭೆಯು ಸಾದೃಶ್ಯ-ಸಂಭಾವ್ಯಗಳ ಗಡಿಗಳನ್ನೂ ಮೀರಿ ನಿರಂಕುಶವಾಗ...
೫ ದೃಷ್ಟಾಂತವು ಔಪಮ್ಯಪ್ರಕಾರದ ಅಲಂಕಾರಗಳಲ್ಲೊಂದು. ಹೋಲಿಸುವ ಮತ್ತು ಹೋಲಿಸಲ್ಪಡುವ ವಸ್ತುಗಳ ನಡುವೆ ಬಿಂಬ-ಪ್ರತಿಬಿಂಬಭಾವವು ರೂಪುಗೊಂಡಲ್ಲಿ ಈ ಅಲಂಕಾರವು ಸಿದ್ಧ. ಇದು ಬಲುಮಟ್ಟಿಗೆ ಉಪಮೆಯಂತೆಯೇ...
೭ ಸಮಾಸೋಕ್ತಿಯು ಅಲಂಕಾರಪ್ರಪಂಚದ ಒಂದು ಸಾರ್ಥಕಸದಸ್ಯ. ಪ್ರಕೃತಾಪ್ರಕೃತವಸ್ತುಗಳಲ್ಲಿ ವಿಶೇಷಣೈಕ್ಯವನ್ನು ತರುವುದೇ ಇಲ್ಲಿಯ ಪ್ರಮುಖಸ್ವಾರಸ್ಯ. ಹೆಚ್ಚಿನ ಬಾರಿ ಇಂಥ ವಿಶೇಷಣೈಕ್ಯವು ಶ್ಲೇಷದಿಂದ ಸ...
ಅನುಮಾನಾಲಂಕಾರವು “ಅನುಮಾನ”ವೆಂಬ ತಾರ್ಕಿಕಪ್ರಮಾಣವನ್ನೇ ಆಧರಿಸಿದೆ. ಇದನ್ನು ಕೆಲವರು ಅಲಂಕಾರವಾಗಿಯೇ ಅಂಗೀಕರಿಸರು. ಬಲುಮಟ್ಟಿಗೆ ಕಾವ್ಯಲಿಂಗದಲ್ಲಿಯೇ ಇದು ಅಡಕವಾದೀತು. ಆದರೆ ಇಂಥ ಅಲಂಕಾರದಲ್ಲಿಯ...
೯ ಅರ್ಥಾಲಂಕಾರಗಳು ವಾಕ್ಯವಿಶ್ರಾಂತವಾದರೆ ಶಬ್ದಾಲಂಕಾರಗಳು ಶಬ್ದವಿಶ್ರಾಂತ. ಅಂದರೆ, ಇವುಗಳಿಗೆ ಶಬ್ದರೂಪದಲ್ಲಿಯೇ ತಾತ್ಪರ್ಯ. ಅರ್ಥಾಲಂಕಾರಗಳು ಬುದ್ಧಿಗಮ್ಯವಾಗಿ ಭಾವವನ್ನು ಮೀಟಿದರೆ ಶಬ್ದಾಲಂಕಾ...